Posts

Showing posts from October, 2017

ಅಗ್ನಿ ಎಂಬ ರೂಪಕ

ಪ್ರಾಚೀನರಿಗೆ ಅಗ್ನಿ ನಮ್ಮ ಪ್ರಜ್ಞೆಯ ರೂಪಕ. ನಮ್ಮ ಪ್ರಜ್ಞೆ ಪ್ರಪಂಚವನ್ನು ಭಕ್ಷಿಸಿ ಬೆಳಗುತ್ತದೆ. ಅಗ್ನಿ ಇಂಧನವನ್ನು ಭಕ್ಷಿಸಿ ಬೆಳಗುವಂತೆ. ದಹಿಸುವ ಯಾವ ವಸ್ತುವಾದರೂ ಸರಿಯೆ ಅದು ಅಗ್ನಿಗೆ ಇಂಧನವಾಗಿ ಸಲ್ಲುತ್ತದೆ. ವಸ್ತುಗಳನ್ನು ಹಲವು ಹೆಸರುಗಳಿಂದ ಮತ್ತು ರೂಪಗಳಿಂದ ಗುರುತಿಸುತ್ತೇವೆ. ಇದು ಆಟಿಕೆ, ಇದು ಕುರ್ಚಿ ಎಂದು. ಆದರೆ, ಅಗ್ನಿಗೆ ವಸ್ತುಗಳ ಬಗ್ಗೆ ಯಾವ ತಾರತಮ್ಯವೂ ಇಲ್ಲ. ವಸ್ತುವಿನ ರೂಪ ಏನೇ ಇರಲಿ, ಅಗ್ನಿಗೆ ಅದು ಸಲ್ಲುವುದು ಇಂಧನವಾಗಿ ಮಾತ್ರ. ಹೇಗಿದ್ದರೂ, ಅಗ್ನಿಗೆ ಸಂದಮೇಲೆ ಆ ವಸ್ತುವಿನ ನಾಮರೂಪ ಭೇದಗಳೆಲ್ಲವೂ ಅಳಿದೇ ಹೋಗುತ್ತದಲ್ಲ. ನಮ್ಮ ಪ್ರಜ್ಞೆಗೆ ಸಲ್ಲುವ ಪ್ರಪಂಚದ ವಸ್ತುಗಳೂ ಹೀಗೆಯೇ. ಅವು ನಮ್ಮ ಸುಖಕ್ಕೆ ಬೇಕು. ಅನ್ನ, ನೀರು, ಹಣ, ಕೀರ್ತಿ, ಆರೋಗ್ಯ, ದೇಹಸೌಂದರ್ಯ ಇವೆಲ್ಲವೂ ನಮ್ಮ ಪ್ರಜ್ಞೆಗೆ, ಅಂದರೆ ನಮಗೆ, ಬೇಕೇಬೇಕು. ಆದರೆ, ಈ ಎಲ್ಲ ವಸ್ತುಗಳೂ ಬೇಕಿರುವುದು ಪ್ರಜ್ಞೆಗೆ ಇಂಧನವಾಗಿ ಮಾತ್ರ. ಅದರ ನಿರ್ದಿಷ್ಟ ರೂಪ, ಹೆಸರು, ಲಕ್ಷಣಗಳೆಲ್ಲಾ ಸಾಂದರ್ಭಿಕ ಮಾತ್ರ. ಇಂತಹ ಇಂಧನವನ್ನು ಕೊಟ್ಟಷ್ಟೂ ನಮ್ಮ ಪ್ರಜ್ಞೆ ಉರಿಯುತ್ತಲೇ ಇರುತ್ತದೆ. ಎಲ್ಲಿಯವರೆಗೂ ನಮ್ಮ ಪ್ರಜ್ಞೆ ಪ್ರಪಂಚವನ್ನು, ಅದರ ವಸ್ತುಗಳನ್ನು, ತನ್ನ ಇಂಧನವನ್ನಾಗಿ ಭಕ್ಷಿಸುತ್ತಿರುತ್ತದೋ ಅಲ್ಲಿಯವರೆಗೂ ನಾವು ಜೀವಂತವಾಗಿದ್ದೇವೆ ಎಂದರ್ಥ.  ಇಲ್ಲಿಯೇ ಒಂದು ಪ್ರಶ್ನೆಯೂ ಏಳುತ್ತದೆ. ನಮಗೆ ವಸ್ತುಗಳು ಇಷ್ಟವಾಗುವುದು ನಿರ್ದಿಷ್ಟ ವಸ್ತ

ಲೋಕನಿಂದೆಗೆ ಹೆದರುವ ಸಜ್ಜನರು

ಕೆಟ್ಟ ಕೆಲಸ ಮಾಡಬಾರದು. ಯಾಕೆ? ಅದಕ್ಕೆ ಎರಡು ಉತ್ತರ. ಮೊದಲನೆಯದು: “ಹಾಗೆ ಮಾಡಿದರೆ ನಾಲ್ಕು ಜನರ ಮುಂದೆ ನಮ್ಮ ಮರ್ಯಾದೆ ಏನಾಗುತ್ತದೆ?” ಎರಡನೆಯದು: “ನನ್ನ ನೈತಿಕ ನಂಬಿಕೆಗಳಿಗೆ ವಿರುದ್ಧವಾಗಿರುವ ಏನನ್ನೂ ನಾನು ಮಾಡುವುದಿಲ್ಲ”.  ಚಿಕ್ಕಂದಿನಲ್ಲಿ ಏನಾದರೂ ಮಾಡಬಾರದ್ದು ಮಾಡಿ ಸಿಕ್ಕಿಹಾಕಿಕೊಂಡರೆ, ನಮ್ಮಜ್ಜಿ, ನಮ್ಮಮ್ಮ ಎಲ್ಲರೂ ನನ್ನನ್ನು ಬೈಯುತ್ತಿದ್ದದ್ದು “ನಾಲ್ಕು ಜನ ನೋಡಿ ನಗ್ತಾರೆ. ನಾಚಿಕೆ ಆಗ್ಬೇಕು ನಿನಗೆ” ಅಂತ. ಆದರೆ ಅವರೆಲ್ಲಾ ಹಳೆಯ ಕಾಲದವರು. ಸಮಾಜದ ಬಗೆಗಿನ ಭಯದಿಂದ ನಾವು ನೀತಿವಂತರಾಗಿರಬೇಕು ಎನ್ನುವವವರು. ನನ್ನ ಸ್ನೇಹಿತರು ಹಾಗಲ್ಲ. ಬಹಳ ಆಧುನಿಕರು. ಅವರೂ ಒಳ್ಳೆಯವರೇ. ಆದರೆ ಅವರಿಗೆ ಸಮಾಜದ ಭಯದಿಂದ ಒಳ್ಳೆಯವರಾಗಿರುವುದು ಆಷಾಢಭೂತಿಗಳ ಲಕ್ಷಣ ಎಂದು ಕಾಣಿಸುತ್ತದೆ. ನಾವು ನಮ್ಮ ನೈತಿಕ ಮೌಲ್ಯಗಳನ್ನು ಪಾಲಿಸಬೇಕೇ ಹೊರತೂ ಇನ್ನೊಬ್ಬರ ಬಗೆಗಿನ ಭಯಕ್ಕಾಗಿ ಒಳ್ಳೆಯವರಾಗಿರಬಾರದು. ಇಬ್ಬರಲ್ಲಿ ಯಾರು ಸರಿ? ನನ್ನ ಪ್ರಕಾರ, ನನ್ನ ಅಜ್ಜಿಯೇ ಸರಿ. ಯಾಕೆ? ಸರಿ-ತಪ್ಪುಗಳು ಕೂಡಾ ಬೆಟ್ಟಗುಡ್ಡಗಳಂತೆ ನಮ್ಮ ಪ್ರಪಂಚದ ಸತ್ಯಗಳೇ ಹೊರತೂ ನಮ್ಮ ಮನಸ್ಸಿನ ಖಯಾಲಿಗಳಲ್ಲ. ಸರಿ-ತಪ್ಪುಗಳನ್ನು ನಾವೇ ಮಾಡಿಕೊಂಡಿರುವುದಲ್ಲವೇ ಎಂದು ನೀವು ಕೇಳಬಹುದು. ಹೌದು. ಆದರೆ, ನೀರಿನ ಕೆರೆಗಳನ್ನೂ ನಾವೇ ಮಾಡಿಕೊಂಡಿರುವುದು. ಅಷ್ಟು ಮಾತ್ರಕ್ಕೆ ಅವೇನೂ ಕಡಿಮೆ ಸತ್ಯಗಳಾಗುವುದಿಲ್ಲವಲ್ಲ? ನಾವೇ ಮಾಡಿಕೊಂಡಿದ್ದು ಎಂದು ಕೆರೆಯಲ್ಲಿ

ನೆಟ್ಟಗೆ ಯೋಚಿಸಲು ಹತ್ತು ಸೂತ್ರಗಳು

ನಾವೆಲ್ಲಾ ಸ್ಕೂಲು ಕಾಲೇಜಿಗೆ ಹೋಗಿ ಬುದ್ಧಿವಂತರಾಗುತ್ತೇವೆ ಎಂದು ಲೆಕ್ಕ. ಅಂದರೆ ವೈಜ್ಞಾನಿಕವಾಗಿ ಯೋಚಿಸಲು ಪ್ರಾರಂಭಿಸುತ್ತೇವೆ ಎಂದರ್ಥ. ಸ್ಕೂಲು ಕಾಲೇಜುಗಳು ವೈಜ್ಞಾನಿಕ ಮನೋಭಾವನೆ ಎನ್ನುವಂಥ ರೀತಿಯ ಯಾವುದೋ ಒಂದು ವಿಶೇಷ ಶಕ್ತಿಯನ್ನು ಬೆಳೆಸುತ್ತವೆ ಎಂದು ನಮ್ಮ ನಂಬಿಕೆ. ಆದರೆ, ಇಲ್ಲೊಂದು ಎಡವಟ್ಟಿದೆ. ವೈಜ್ಞಾನಿಕ ಚಿಂತನೆ ಎನ್ನುವ ಮಾದರಿಯ ಯಾವ ಚಿಂತನೆಯೂ ಈ ಪ್ರಪಂಚದಲ್ಲಿಲ್ಲ. ಅಥವಾ, ಹೀಗೆ ಯೋಚನೆ ಮಾಡಿದರೆ ಅದು ವೈಜ್ಞಾನಿಕ, ಹಾಗೆ ಯೋಚನೆ ಮಾಡಿದರೆ ಅದು ಅವೈಜ್ಞಾನಿಕ ಎನ್ನುವ ಯಾವ ಕಾಯ್ದೆ ಪುಸ್ತಕವೂ ಇಲ್ಲ. ಹಾಗಾಗಿ, ಈ ವೈಜ್ಞಾನಿಕ ಮನೋಭಾವದ ಹಿಂದೆ ಬಿದ್ದರೆ ಹಳ್ಳ ಹತ್ತುವುದು ಗ್ಯಾರಂಟಿ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಸ್ವಲ್ಪ ಚಾಲಾಕಿತನ ಉಪಯೋಗಿಸಬೇಕು. ಅಂತಹ ಚಾಲಾಕಿತನದ ಹತ್ತು ಉಪಾಯಗಳು ಇಲ್ಲಿವೆ. ಆದರೆ, ಎಚ್ಚರ. ಇದು ಉಪಾಯಗಳು. ನಿಯಮಗಳಲ್ಲ. ಅಡ್ಡಾದಿಡ್ಡಿಯಾಗಿ ಬಳಸಿ ಇವು ಕೈಕೊಟ್ಟರೆ ಮತ್ತೆ ಬೇರೆಯವರು ಜವಾಬ್ದಾರರಲ್ಲ. ಸಾಮಾನ್ಯವಾಗಿ ಸ್ಕೂಲು ಕಾಲೇಜುಗಳು ಕಲಿಸುವುದು ದಡ್ಡರ ಸೂತ್ರ. ಅದರಾಚೆಗೆ ಇರುವುದು ಜಾಣರ ಸೂತ್ರ.  ದಡ್ಡರ ಸೂತ್ರ 1:  ಯಾವುದನ್ನು ಸರಿಯೆಂದು ಸಾಬೀತುಮಾಡಬಹುದೋ ಅದು ಮಾತ್ರ ವೈಜ್ಞಾನಿಕ.  ಜಾಣರ ಸೂತ್ರ 1:  ಯಾವುದನ್ನು ತಪ್ಪೆಂದು ಸಾಬೀತುಮಾಡುವ ಸಾಧ್ಯತೆ ಇದೆಯೋ ಅದು ಮಾತ್ರ ವೈಜ್ಞಾನಿಕ.  ಸಾಮಾನ್ಯವಾಗಿ ವಿಜ್ಞಾನ ಎಂದರೆ ಸರಿ ಎಂದು ಸಾಬೀತು ಮಾಡಬಹುದಾದದ್ದು ಎಂದು ನಮ್ಮ ನಂ