Posts

Showing posts from October, 2022

ಐಡಿಯಾಲಜಿ ಮತ್ತು ಸಂಘರ್ಷ: ವಿಚಾರವಾದದ ಒಂದು ದೀರ್ಘ ಇತಿಹಾಸ

  ಆಧುನಿಕ ಪ್ರಪಂಚಕ್ಕೇ ಚಾರಿತ್ರಿಕವಾಗಿ ಅನನ್ಯವಾದ ಒಂದು ರೀತಿಯ ಸಂಘರ್ಷವಿದೆ. ಅದೇ ಐಡಿಯಲಾಜಿಕಲ್ ಸಂಘರ್ಷ. ಆಧುನಿಕ ಇತಿಹಾಸದ ಅತೀ ಮುಖ್ಯ ಸಂಘರ್ಷಗಳನ್ನು ಗಮನಿಸಿದರೆ ಇದರ ಅಳವು ತಿಳಿಯುತ್ತದೆ. ೧೬೪೨-೫೧ರ ನಡುವೆ ನಡೆದ ಇಂಗ್ಲಿಶ್ ಸಿವಿಲ್ ವಾರ್ ರಾಜ್ಯಧಿಕಾರ ಮತ್ತು ಧಾರ್ಮಿಕ ಸ್ವಾತಂತ್ರದ ಕುರಿತ ಎರಡು ವಿರುದ್ಧ ಐಡಿಯಾಲಜಿಗಳನ್ನು ಪ್ರತಿಪಾದಿಸಿದ ಸಂಸತ್ ಪರರ ಪಕ್ಷ ಮತ್ತು ರಾಜಾಧಿಕಾರದ ಪಾರಂಪರಿಕ ವ್ಯವಸ್ಥೆಯನ್ನು ಬೆಂಬಲಿಸಿದ ಅರಸೊತ್ತಿಗೆಯ ಪರರ ಪಕ್ಷದ ವಿರುದ್ಧ ನಡೆದ ನಾಗರಿಕ ದಂಗೆ. ೧೭೮೯ರ ಫ್ರೆಂಚ್ ಕ್ರಾಂತಿ ನಡೆದಿದ್ದು ಕೇವಲ ಒಂದು ರಾಜಸತ್ತೆಯ ವಿರುದ್ಧವಲ್ಲ. ಅದರ ಲಕ್ಷ್ಯ ಇದ್ದದ್ದು ಅರಸೊತ್ತಿಗೆಯ ವ್ಯವಸ್ಥೆಯನ್ನೇ ಸಮಾಜದಿಂದ ತೆಗೆದುಹಾಕುವುದರಲ್ಲಿ. ಅಂದರೆ , ಅದು ಸಮಾಜವನ್ನು ಕುರಿತ ಒಂದು ನಿರ್ದಿಷ್ಟ ಐಡಿಯಾಲಜಿಯ ಆಧಾರದ ಮೇಲೆ ನಡೆದ ಒಂದು ‍‌ದಂಗೆ , ಅಥವಾ ಕ್ರಾಂತಿ. ಹಾಗೆಯೇ , ೧೯೧೭ರ ರಷ್ಯನ್ ಕ್ರಾಂತಿ. ಅದಂತೂ ಕೇವಲ ರಷ್ಯಾದ ಝಾರ್ ರಾಜಸತ್ತೆಯನ್ನು ಉರುಳಿಸುವುದಷ್ಟೇ ಅಲ್ಲದೇ ಒಂದು ನಿರ್ದಿಷ್ಟ ರೀತಿಯ ಪ್ರಭುತ್ವವನ್ನು ಹುಟ್ಟುಹಾಕಲು ಹವಣಿಸಿದ ಕ್ರಾಂತಿ. ಒಂದು ದೇಶದ ಸಂಪತ್ತು ಮತ್ತು ಉತ್ಪಾದನಾ ಸಾಮರ್ಥ್ಯವನ್ನೂ ಜೊತೆಗೇ ಬೌದ್ಧಿಕ ಮತ್ತು ಧಾರ್ಮಿಕ ಚಿಂತನೆಯನ್ನೂ ಸರಕಾರವೇ ನಿರ್ದೇಶಿಸುವ ಮಹತ್ವಾಕಾಂಕ್ಷೆಯ ಉದ್ಯಮ ಅದು. ಚೈನಾದ ೧೯೪೯ರ ಕ್ರಾಂತಿಯೂ ಅಷ್ಟೇ. ಮಾವೋನ ಚೈನಾ ಪ್ರಜಾ ಗಣರಾಜ್ಯ ಜನ್ಮ ತಾಳಿದ್ದು ರಾಷ್ಟ್ರೀಯವ