Posts

Showing posts from November, 2017

ವಿದ್ಯಾಸಂಸ್ಥೆಗಳು ಮತ್ತು ಶೈಕ್ಷಣಿಕ ಪರಿಸರ

ಈಗ ಕೆಲವು ವರ್ಷಗಳ ಹಿಂದೆ ಅಮೆರಿಕಾದ ಇಲ್ಲಿನೋಯ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಕರ್ನಾಟಕದ ವಿದ್ಯಾಸಂಸ್ಥೆಗಳ ಒಂದು ಅಧ್ಯಯನ ಮಾಡಲು ಬಂದಿದ್ದರು. ಅವರ ಅಧ್ಯಯನದ ಉದ್ದೇಶ ವಿದ್ಯಾಸಂಸ್ಥೆಗಳು ಎಷ್ಟು ಚೆನ್ನಾಗಿ ಅಥವಾ ಸಾಧಾರಣವಾಗಿ ಕೆಲಸ ಮಾಡುತ್ತಿವೆ ಎಂದು ನೋಡುವುದಲ್ಲ. ಬದಲಾಗಿ, ಈ ವಿದ್ಯಾಸಂಸ್ಥೆಗಳು ಒಟ್ಟಾರೆಯಾಗಿ ಯಾವ ರೀತಿಯ ಶೈಕ್ಷಣಿಕ ಪರಿಸರದಲ್ಲಿ ಕೆಲಸಮಾಡುತ್ತಿವೆ ಮತ್ತು ತಮ್ಮತಮ್ಮ ಶೈಕ್ಷಣಿಕ ಪರಿಸರದ ಕುರಿತು ಆ ಸಂಸ್ಥೆಗಳಿಗೆ ಎಷ್ಟು ತಿಳುವಳಿಕೆ ಇದೆ ಎಂದು ನೋಡುವುದು ಅವರ ಉದ್ದೇಶ. ಅಂದರೆ, ತಮ್ಮ ವಿದ್ಯಾಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳ ಅಗತ್ಯಗಳೇನು, ಅಂತಹ ಅಗತ್ಯಗಳನ್ನು ಪೂರೈಸುತ್ತಿರುವ ಮಿಕ್ಕ ಎಷ್ಟು ವಿದ್ಯಾಸಂಸ್ಥೆಗಳು ಆ ಪ್ರದೇಶದಲ್ಲಿವೆ, ಆ ವಿದ್ಯಾಸಂಸ್ಥೆಗಳ ಜೊತೆ ನಾವು ಪೈಪೋಟಿ ಮಾಡುತ್ತಿದ್ದರೆ, ಅವರಿಗಿಂತ ಭಿನ್ನವಾಗುವ ರೀತಿ ಹೇಗೆ, ಅಥವಾ, ಪೈಪೋಟಿ ಮಾಡದೇ ಇದ್ದರೆ, ಅವುಗಳ ಕೆಲಸಕ್ಕೂ ನಮ್ಮ ಸಂಸ್ಥೆಯ ಕೆಲಸಕ್ಕೂ ಧ್ಯೇಯೋದ್ದೇಶಗಳು ಪೂರಕವಾಗಿರುವಂತೆ ನೋಡಿಕೊಳ್ಳುವುದು ಹೇಗೆ, ನಮ್ಮ ವಿದ್ಯಾರ್ಥಿಗಳು ಯಾವ ರೀತಿಯ ಸಂಸ್ಥೆಗಳಿಂದ ನಮ್ಮಲ್ಲಿಗೆ ಬರುತ್ತಿದ್ದಾರೆ ಮತ್ತು ಯಾವ ರೀತಿಯ ಉದ್ಯೋಗದ ಅಥವಾ ಉನ್ನತ ವ್ಯಾಸಂಗದ ಸಂಸ್ಥೆಗಳಿಗೆ ನಮ್ಮಲ್ಲಿಂದ ಹೋಗುತ್ತಿದ್ದಾರೆ, ನಮ್ಮ ಪರಿಸರದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುವುದಕ್ಕೆ ನಮಗೆ ಯಾವ ರೀತಿಯ ತಜ್ಞತೆ ಇರುವ ಶಿಕ್ಷಕರು ಬೇಕು, ನಮ್ಮ ಕ್ಷೇತ್ರದಲ್ಲಿ