Posts

Showing posts from September, 2017

ಗಾಂಧೀ ಮಾದರಿಯ ಸಾಮಾಜಿಕ ವಿಮರ್ಶೆ

ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ವಿಶೇಷವಾಗಿ ಹಿಂದೂ ಆಚಾರಗಳನ್ನು, ಗಾಂಧಿ ಟೀಕಿಸಿದ್ದಿದೆ. ಉದಾಹರಣೆಗೆ, ಅಸ್ಪೃಶ್ಯತೆ, ಪ್ರಾಣಿಹಿಂಸೆ. ಆದರೆ, ವಿಚಿತ್ರವೆಂದರೆ, ಇನ್ನು ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ನಮಗೆ ಇವತ್ತು ವಿಕೃತವೆಂದು ಕಾಣುವಂಥವನ್ನು ಸಮರ್ಥಿಸಿದ್ದೂ ಇದೆ. ಉದಾಹರಣೆಗೆ, ವರ್ಣಾಶ್ರಮಧರ್ಮ ಮತ್ತು ಬ್ರಹ್ಮಚರ್ಯ. ಬಿಹಾರದ ಭೂಕಂಪಕ್ಕೆ ಅಸ್ಪೃಶ್ಯತೆಯ ಆಚರಣೆಯ ಪಾಪವೇ ಕಾರಣ ಎಂದೂ ಹೇಳಿದ್ದಿದೆ. ಗಾಂಧಿಯನ್ನು ಮೆಚ್ಚುವವರು ಇಂತಹ ಆಭಾಸಗಳನ್ನು ದೊಡ್ಡವರ ಸಣ್ಣ ತಪ್ಪುಗಳು ಎನ್ನುವಂತೆ ಸಂಕೋಚದಿಂದ ತೇಲಿಸುತ್ತಾರೆ. ಗಾಂಧಿಯನ್ನು ವಿಮರ್ಶಿಸುವವರು ಇದನ್ನೇ ಮುಂದುಮಾಡಿಕೊಂಡು ಗಾಂಧಿ ಆಳದಲ್ಲಿ ಎಂತಹ ಪಿತೃಪ್ರಧಾನವಾದ, ಮೇಲ್ಜಾತಿಯವರ ಪ್ರಕಾರ ಆದರ್ಶವೆಂದು ಕಾಣುವ ಒಂದು ಊಳಿಗಮಾನ್ಯ ರೀತಿಯ ಸಮಾಜದ ಪ್ರತಿಪಾದಕ ಎಂದೂ ವಾದಿಸುತ್ತಾರೆ. ಗಾಂಧಿಯ ಬಗೆಗಿನ ಗೌರವದಿಂದಲೋ ಏನೋ ಈ ಎರಡೂ ಕಡೆಯವರು ಇಷ್ಟು ಸ್ಫುಟವಾಗಿ, ಒರಟಾಗಿ ತಮ್ಮ ವಿಚಾರಗಳನ್ನು ಹೇಳದೇ ಇರಬಹುದು. ಆದರೆ ಎರಡೂ ಪಕ್ಷಗಳ ಪ್ರತಿಪಾದನೆಯ ಸಾರವಂತೂ ಸುಮಾರು ಹೀಗೆಯೇ ಇರುತ್ತದೆ.  ಈ ಎರಡೂ ಪಕ್ಷಗಳು ಗಾಂಧಿಯ ವಿಚಾರದ ಆಳವನ್ನು ತಿಳಿದುಕೊಳ್ಳುವಲ್ಲಿ ಸೋತಿವೆ ಎಂದು ನನ್ನ ಅಭಿಪ್ರಾಯ. ಅಷ್ಟೇ ಅಲ್ಲ, ತಮ್ಮ ನಡುವೆ ಕೈಬದಲಾಯಿಸಿಕೊಂಡು, ಇಬ್ಬರೂ ಗಾಂಧಿಯ ವಿಚಾರಗಳನ್ನು ವಿಕೃತವಾಗಿ ವ್ಯಾಖ್ಯಾನ ಮಾಡಿದ್ದಾರೆ ಎಂದೂ ನನ್ನ ಅನಿಸಿಕೆ. ಇದನ್ನು ತೋರಿಸುವುದು ಪ್ರಸ್ತುತ

ಸಮಾನತೆಯ ಕುರಿತು ಐದು ತಕರಾರುಗಳು

ಆಧುನಿಕ ಪ್ರಪಂಚವನ್ನು ರೂಪಿಸಿರುವ ಆದರ್ಶಗಳಲ್ಲೇ ಸಮಾನತೆ ಅತ್ಯಂತ ಮುಖ್ಯವಾದದ್ದು. ಫ್ರೆಂಚ್ ಕ್ರಾಂತಿಯ ಕಾಲದಿಂದ ಮೊದಲುಗೊಂಡು ಎಲ್ಲ ಸಾಮಾಜಿಕ ರಾಜಕೀಯ ಯೋಜನೆಗಳು, ವ್ಯವಸ್ಥೆಗಳಲ್ಲೂ ಸಮಾನತೆಯನ್ನು ತರುವ ಕಾರ್ಯಕ್ರಮಗಳೇ ಎದ್ದು ಕಾಣುತ್ತವೆ. ಅಷ್ಟೇ ಅಲ್ಲ, ಸಾಮಾಜಿಕ ರಾಜಕೀಯ ಸ್ಥಿತಿಗತಿಗಳು ಮತ್ತು ಸಂಸ್ಥೆಗಳನ್ನು ಅರಿಯುವುದಕ್ಕೆ ಮತ್ತು ಅವನ್ನು ವಿಮರ್ಶಿಸುವುದಕ್ಕೆ ಸಮಾನತೆಯೇ ಅತೀ ಮುಖ್ಯ ಪರಿಕಲ್ಪನೆ. ಯಾವ ಸರಕಾರೀ ಯೋಜನೆಯಾಗಲೀ, ಅಥವಾ, ಚಿಂತನಾ ಪ್ರಸ್ಥಾನವಾಗಲಿ, ಅದನ್ನು ಮೊದಲು ಅಳೆಯುವುದು ಸಮಾನತೆಯ ನೆಲೆಯಲ್ಲಿ. ಈ ನಿರ್ದಿಷ್ಟ ಯೋಜನೆ ಸಮಾನತೆಯನ್ನು ಹೆಚ್ಚಿಸುತ್ತದೆಯೇ ಇಲ್ಲವೇ, ಆ ಕಾನೂನು ಅಸಮಾನತೆಯನ್ನು ಉಂಟುಮಾಡುತ್ತದೆಯೇ, ಇವರ ಸಾಹಿತ್ಯ ಸಮಾನತೆಯ ಸಮಾಜವನ್ನು ಕಟ್ಟುವುದಕ್ಕೆ ಪೂರಕವಾಗಿದೆಯೇ, ಅವರ ಆಚಾರವಿಚಾರ ಅಸಮಾನತೆಯನ್ನು ಪೋಷಿಸುತ್ತದೆಯೇ, ಈ ರೀತಿಯ ಪ್ರಶ್ನೆಗಳು ಸಮಾನತೆ ಹೇಗೆ ನಮ್ಮ ಇಂದಿನ ಕಾಲದ ಚಿಂತನೆಯ ಕ್ಷಿತಿಜವೇ ಆಗಿದೆ ಎನ್ನುವುದನ್ನು ತೋರಿಸುತ್ತದೆ. ಆದರೆ, ಸಮಾನತೆಯ ಆದರ್ಶ ಮತ್ತು ಸಮಾನತೆಯ ಪರಿಕಲ್ಪನೆ ಎರಡೂ ಮೇಲುನೋಟಕ್ಕೆ ಕಾಣಿಸುವಷ್ಟು ಸ್ವಯಂವೇದ್ಯವೂ ಅಲ್ಲ, ಸಿಂಧುವೂ ಅಲ್ಲ. ಒಂದು ಆದರ್ಶವಾಗಿ ಸಮಾನತೆ ಯಾವ ರೀತಿಯ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಮತ್ತು ಒಂದು ಪರಿಕಲ್ಪನೆಯಾಗಿ ಯಾವ ರೀತಿಯ ತಾರ್ಕಿಕ ತೊಡಕುಗಳನ್ನು ಉಂಟುಮಾಡುತ್ತದೆ ಎಂದು ಗುರುತಿಸುವುದು ಈ ಲೇಖನದ ಉದ್ದೇಶ. ಮತ್ತು ನಾ

ಸಂಪ್ರದಾಯಗಳನ್ನು ಪ್ರಶ್ನಿಸುವ ಮುನ್ನ ವಿಚಾರವಾದಿಗಳು ಮಾಡಬೇಕಾದ್ದೇನು?

ಉದಾರವಾದ ಮತ್ತು ಪ್ರಜಾತಾಂತ್ರಿಕ ಸಂವಾದದ ಲಕ್ಷಣ ಸಂಪ್ರದಾಯಗಳು ಮತ್ತು ಪಾರಂಪರಿಕ ಆಚಾರಗಳನ್ನು ಉದಾರವಾದಿಗಳು ವಿಮರ್ಶೆ ಮಾಡುವ ರೀತಿಯ ಬಗ್ಗೆ ಈ ಲೇಖನ ಒಂದು ತಕರಾರನ್ನು ಎತ್ತುತ್ತದೆ. ಜೊತೆಗೆ ಪಾರಂಪರಿಕ ರೂಢಿಗಳು ಮತ್ತು ಆಚಾರಗಳನ್ನು ವಿಮರ್ಶಿಸಲು ಬೇಕಾದ ಒಂದು ಹೊಸ ಚೌಕಟ್ಟನ್ನು ರೂಪಿಸಲು ಪ್ರಯತ್ನಿಸುತ್ತದೆ. ಆ ಮೂಲಕ ಇಂತಹ ರೂಢಿಗಳು ಮತ್ತು ಅವನ್ನು ಪಾಲಿಸುವ ಸಮುದಾಯಗಳ ನಡುವಿನ ಸಂಬಂಧವನ್ನು ಆಳವಾಗಿ ಶೋಧಿಸುವ ಪ್ರಯತ್ನವನ್ನೂ ಮಾಡುತ್ತದೆ. ಪಾರಂಪರಿಕ ಆಚಾರಗಳನ್ನು ವಿರೋಧಿಸಬೇಕಾದ ಸಂದರ್ಭ ಬಂದಾಗ, ಸಾಮಾನ್ಯವಾಗಿ ಉದಾರವಾದಿಗಳು ಹೇಳುವ ಮಾತೇನೆಂದರೆ, "ಇಂತಹ ಆಚಾರಗಳು ನಮ್ಮ ಹಕ್ಕುಗಳನ್ನು ನಿರಾಕರಿಸುತ್ತವೆ" ಎಂದು. ಉದಾಹರಣೆಗೆ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಹೋಗುವುದನ್ನು ನಿಷೇಧಿಸಿದರೆ, ಆಗ ಮಹಿಳೆಯರ ಸಮಾನತೆಯ ಹಕ್ಕಿಗೆ ಚ್ಯುತಿ ಬರುತ್ತದೆ ಎನ್ನುವುದು ಇವರ ವಾದ. ಆದರೆ, ಇಂತಹ ವಾದಗಳು ಒಂದು ವಿಚಿತ್ರ ರೀತಿಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾಗಿ, ಹಕ್ಕಿನ ತತ್ವವನ್ನು (rights principle) ಆಧರಿಸಿ ಇಂತಹ ಸಂಗತಿಗಳನ್ನು ನಿರ್ಧರಿಸುವ ಬದಲು, ಕೇಡಿನ ತತ್ವವನ್ನು (injury principle) ಆಧರಿಸಿ ನಿರ್ಧರಿಸಬೇಕು ಎನ್ನುವುದು ಈ ಲೇಖನದ ವಾದ. ಸಾಮಾನ್ಯವಾಗಿ ಉದಾರವಾದಿಗಳಲ್ಲೇ ಒಂದು ಗುಂಪಿನವರು ಹೇಳುವುದೇನೆಂದರೆ, ಸಮುದಾಯಗಳು ತಂತಮ್ಮ ಆಚಾರ ವಿಚಾರಗಳನ್ನು ತ

ಮಾಧ್ಯಮಗಳು, ಐಡಿಯಾಲಜಿ ಮತ್ತು ವಾಸ್ತವದ ಬಿಕ್ಕಟ್ಟು

1991ರಲ್ಲಿ ಅಮೆರಿಕ ಮತ್ತು ಇರಾಕ್ ನಡುವೆ ಕೊಲ್ಲಿ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಜಾನ್ ಬೌದ್ರಿಯಾ ಎನ್ನುವ ಫ್ರೆಂಚ್ ಚಿಂತಕ ‘ಕೊಲ್ಲಿ ಯುದ್ಧ ನಡೆದೇ ಇಲ್ಲ’ ಎಂದು ಘೋಷಿಸಿ ಒಂದು ಲೇಖನ ಬರೆದ. ಸತ್ಯವೆನ್ನುವುದು ಏನೂ ಇಲ್ಲ, ಇರುವುದೆಲ್ಲಾ ಸಾಪೇಕ್ಷವಾದ ಅಭಿಪ್ರಾಯಗಳು ಎಂದು ತಿರುಗಾಡಿಕೊಂಡಿದ್ದ ಆ ಕಾಲದ ಫ್ರೆಂಚ್ ಚಿಂತಕರ ಕಾಯಿಲೆಯೇ ಬೌದ್ರಿಯಾನಿಗೂ ಎಲ್ಲೋ ಸ್ವಲ್ಪ ಜಾಸ್ತಿ ತಗುಲಿದೆ ಎಂದು ಟೀಕಾಕಾರರು ಅವನನ್ನು ಜರೆದರು. ಆ ಕಾಲದ ಅಕಡೆಮಿಕ್ ಫ್ಯಾಶನ್ನುಗಳ ಅಮಲು ಏರಿದವನಂತೆ ಬರೆದ ಬೌದ್ರಿಯಾನ ಮಾತು ಪೋಸ್ಟ್- ಮಾಡರ್ನ್ ಎಂದು ಕರೆದುಕೊಳ್ಳುವ ಚಿಂತಕರ ಪೊಳ್ಳುತನಕ್ಕೆ ಸಾಕ್ಷಿ ಎಂದು ಇಡೀ ಯೂರೋಪಿನಲ್ಲಿ ಗುಲ್ಲಾಯಿತು. ಆ ಟೀಕೆಯಲ್ಲಿ ಬಹಳಷ್ಟು ಸತ್ಯವೂ ಇತ್ತು. ಆದರೆ ಇಂದು ಬೌದ್ರಿಯಾನ ಮಾತು ಇಪ್ಪತ್ತೈದು ವರ್ಷ ಕಳೆದಾದ ಮೇಲೆ ಮತ್ತೆ ನಮ್ಮನ್ನು ಕಾಡಲು ಬಂದಿದೆ. ಒಂದೇ ವ್ಯತ್ಯಾಸವೆಂದರೆ, ಈಗ ಅದಕ್ಕೆ ಒಂದು ಗೌರವದ ದಿರಿಸು ಹಾಕಲಾಗಿದೆ. ಇಂದಿನ ಅಕಡೆಮಿಕ್ ಪರಿಭಾಷೆಯಲ್ಲಿ ‘ಮೀಡಿಯಾಟೈಸೇಶನ್’ ಎಂದು ಇದಕ್ಕೆ ಹೆಸರು. ಏನಿದು ಮೀಡಿಯಾಟೈಸೇಶನ್? ತೀರ ಇತ್ತೀಚಿನವರೆಗೂ ಕಾವೇರಿ ಗಲಾಟೆ ನಡೆಯುವಾಗ ಮನೆಯಲ್ಲಿ ಕುಳಿತು ಟಿ.ವಿ. ನೋಡುತ್ತಾ, ‘ಇವೆಲ್ಲಾ ಈ ಟಿ.ವಿ.ಯವರು ಹಚ್ಚಿಕೊಡುವ ಜಗಳ. ಜನ ಸುಮ್ಮನೆ ಇರುತ್ತಾರೆ. ಈ ಟಿ.ವಿ. ಚಾನೆಲ್ಲುಗಳೇ ತಮ್ಮ ಟಿ.ಆರ್‌.ಪಿ.ಗಾಗಿ ಹಸಿಹಸಿ ಸುದ್ಧಿಗಳು, ಅರೆಸತ್ಯಗಳು, ರೋಚಕವಾದ ದೃಶ್ಯಗಳನ್ನು ತೋರಿಸ

ಗುರೋಸ್ತು ಮೌನಂ ವ್ಯಾಖ್ಯಾನಂ

ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಒಂದು ವಿಚಿತ್ರವಾದ ಮಾತಿದೆ: “ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರೂರ್ಯುವಾ. ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತುಚ್ಛಿನ್ನಸಂಶಯಾಃ”. ಇದರ ಅರ್ಥ ಹೀಗೆ: “ವಿಚಿತ್ರವಾದ ಸಂಗತಿ ಎಂದರೆ, ಆಲದ ಮರದ ಕೆಳಗೆ ವೃದ್ಧರಾದ ಶಿಷ್ಯರೂ ಮತ್ತು ಯುವಕನಾದ ಗುರುವೂ ಕುಳಿತಿದ್ದಾರೆ. ಗುರುವಿನ ಮೌನವೇ ವ್ಯಾಖ್ಯಾನವಾಗಿದೆ. ಅದರಿಂದಲೇ ಶಿಷ್ಯರ ಸಂಶಯಗಳೆಲ್ಲಾ ಪರಿಹಾರವಾಗುತ್ತಿದೆ”. ಇದು ಹೇಗೆ ಸಾಧ್ಯ? ಚಿಕ್ಕವರಿಂದ ಕಂಪ್ಯೂಟರನ್ನೋ, ಫೋನಿಗೆ ಸಿಮ್ ಕಾರ್ಡ್ ಹಾಕುವುದನ್ನೋ ಕಲಿಯಬಹುದು ಸರಿ. ಆದರೆ, ಆಧ್ಯಾತ್ಮಿಕ ಜ್ಞಾನ, ಶಾಸ್ತ್ರವಾಕ್ಯ ವಿವಕ್ಷೆ ಇವೆಲ್ಲಾ ಅನುಭವದಿಂದ ಮೂಡಲೇಬೇಕಲ್ಲ. ಅದಕ್ಕೆ ವಯಸ್ಸು ಮತ್ತು ಪ್ರಬುದ್ಧತೆಯೂ ಅಗತ್ಯ ತಾನೆ? ವಯಸ್ಸಾದ ಮಾತ್ರಕ್ಕೆ ಇವೆಲ್ಲಾ ಬಂದುಬಿಡುತ್ತದೆ ಎನ್ನುವುದು ಸರಿಯಲ್ಲದಿದ್ದರೂ, ವಯಸ್ಸಿನ ಅನುಭವವಿಲ್ಲದೇ ಬರಬಹುದು ಎನ್ನುವುದೂ ತಪ್ಪು ತಾನೆ? ಬರೀ ಅಷ್ಟೇ ಆದರೂ ಒಪ್ಪಬಹುದಿತ್ತು. ಅದರ ಜೊತೆಗೆ ಇಲ್ಲಿ ಗುರು ಏನನ್ನೂ ಹೇಳುತ್ತಿಲ್ಲ. ಸುಮ್ಮನೆ ಮೌನವಾಗಿದ್ದಾನೆ. ಅಷ್ಟಕ್ಕೇ ಶಿಷ್ಯರ ಸಂಶಯಗಳೆಲ್ಲಾ ಪರಿಹಾರವಾಗುತ್ತಿದೆ. ಇದು ಹೇಗೆ ಸಾಧ್ಯ? ಇವೆಲ್ಲಾ ದಕ್ಷಿಣಾಮೂರ್ತಿಯಂತಹ, (ಮತ್ತು ಅನ್ವಯವಾಗಿ ನೋಡಿದರೆ, ಇದನ್ನು ರಚಿಸಿದ ಶಂಕರಭಗವತ್ಪಾದರೇ ಮೊದಲಾದ) ಮಹಾತ್ಮರಲ್ಲಿ ಸಾಧ್ಯವೇನೋ ಎಂದು ತೇಲಿಸಿಬಿಡುವುದು ಅಷ್ಟು ಸರಿಕಾಣುವುದಿಲ್ಲ. ಈ ಶ್ಲೋಕದ ಅರ್ಥ ಬರಿ ಅಷ್ಟೇ ಆಗ

ಸಬ್ಜೆಕ್ಟ್ / ಸಬ್ಜೆಕ್ಟಿವಿಟಿ

ಪಾಶ್ಚಿಮಾತ್ಯ ಚಿಂತನೆಯಲ್ಲಿ, ಅದರಲ್ಲೂ ಮುಖ್ಯವಾಗಿ ಸೆಕ್ಯುಲರ್ ಚಿಂತನೆಯಲ್ಲಿ, ವ್ಯಕ್ತಿ (individual) ಎನ್ನುವುದು ಒಂದು ಮುಖ್ಯವಾದ ಅಂಶ. ೧೭-೧೮ನೇ ಶತಮಾನದ ಎನ್‌‍ಲೈಟನ್‍ಮೆಂಟ್ ಯುಗದ ನಂತರ, ಭೌತಿಕ ವಿಜ್ಞಾನಗಳು ಮುನ್ನೆಲೆಗೆ ಬಂದವು. ಇದರ ಪರಿಣಾಮವಾಗಿ ಸಾಮುದಾಯಿಕ ಬದುಕಿನ ರೂಢಿಗಳು, ಕಟ್ಟಳೆಗಳು, ರಿಲಿಜಿಯಸ್ ವ್ಯವಸ್ಥೆಗಳು ಮತ್ತು ಮೌಲ್ಯಗಳು, ಪರಂಪರಾಗತವಾದ ಸಾಮಾಜಿಕ ಸಂಬಂಧಗಳು ಇವೆಲ್ಲ ಬಹಳ ಆಳವಾದ ವಿಮರ್ಶೆಗೆ ಪ್ರಶ್ನೆಗೆ ಒಳಪಟ್ಟವು. ಮನುಷ್ಯನಿಗೂ ಮಿಕ್ಕ ಜೀವಿಗಳಿಗೂ ಇರುವ ಅಂತರ, ಮನುಷ್ಯನ ಬುದ್ಧಿಶಕ್ತಿಯ ಕಾರಣದಿಂದ ಅವನಿಗೂ ಸುತ್ತಣ ಪ್ರಪಂಚಕ್ಕೂ ಇರುವ ಸಂಬಂಧ, ಪ್ರತಿಯೊಬ್ಬನು ತನ್ನ ಬದುಕನ್ನು ರೂಪಿಸಿಕೊಳ್ಳಬೇಕಾದ ಅಗತ್ಯ, ಮತ್ತು ಇವೆಲ್ಲಕ್ಕೂ ಕೇಂದ್ರವಾಗಿ ಮನುಷ್ಯನ ಜ್ಞಾನದ ಸತ್ಯಾಸತ್ಯತೆಯನ್ನು ಸ್ಥಾಪಿಸುವ ಬಗೆ, ಇಂತಹ ಹಲವಾರು ಪ್ರಶ್ನೆಗಳು ಪ್ರಮುಖವಾಗಿ ಬೆಳೆದವು. ಇದರಲ್ಲೆಲ್ಲಾ ಇದ್ದ ಮುಖ್ಯ ವಿಚಾರವೆಂದರೆ “ಮನುಷ್ಯನಾಗಿರುವುದು ಎಂದರೇನು?” ಎನ್ನುವ ಪ್ರಶ್ನೆ. ಮನುಷ್ಯನಾಗಿರುವುದು ಎಂದರೆ ಒಬ್ಬ ಸಬ್ಜೆಕ್ಟ್ ಆಗಿರುವುದು ಎನ್ನುವುದು ಪಾಶ್ಚಿಮಾತ್ಯ ಚಿಂತನೆ ಕಂಡುಕೊಂಡ ಉತ್ತರ. ಹಾಗೆಂದರೇನು? ಕಾರಣ ಮತ್ತು ವ್ಯಾಖ್ಯಾನಗಳ ವ್ಯತ್ಯಾಸ ಘಟನೆಗಳನ್ನು ಕುರಿತು ಮಾತನಾಡುವಾಗ ಸಾಮಾನ್ಯವಾಗಿ ನಾವು ಕಾರಣಗಳನ್ನು ನೀಡುತ್ತೇವೆ. ಅಂದರೆ causeಗಳನ್ನು ಕೊಡುತ್ತೇವೆ. ಮಳೆ ಯಾಕೆ ಬರುತ್ತದೆ? ನೀರು ಆವಿಯಾಗಿ ಘನೀಕೃತವಾಗ

ಸ್ಟ್ರಕ್ಚರಲಿಸಂ (ರಚನಾವಾದ/ರಾಚನಿಕವಾದ)

ವಸ್ತುಗಳ ಸ್ವರೂಪವನ್ನು ಅರಿಯುವುದು ಎಂದರೇನು? ಇದಕ್ಕೆ ಸ್ಥೂಲವಾಗಿ ಎರಡು ಉತ್ತರಗಳನ್ನು ಕೊಡಬಹುದು. ಒಂದು, ವಸ್ತುಗಳಲ್ಲಿ ಅಡಕವಾಗಿರುವ ಅವುಗಳ ಅಂತಃಸ್ಸತ್ವವನ್ನು (essence) ಅರಿಯುವುದು. ಎರಡು, ನಮ್ಮ ಪರಿಕಲ್ಪನೆಗಳ ಮೂಲಕ ವಸ್ತುಗಳ ಸ್ಥಿತಿಗತಿಗಳನ್ನು ವಿವರಿಸುವುದು. ನೀವು ಮೊದಲನೆಯ ವರ್ಗಕ್ಕೆ ಸೇರಿದ್ದರೆ, ವಸ್ತುಗಳಿಗೊಂದು ಅಂತಃಸ್ಸತ್ವ ಎಂಬುದಿದೆ ಎನ್ನುತ್ತೀರಿ. ಎರಡನೆಯ ವರ್ಗಕ್ಕೆ ಸೇರಿದ್ದರೆ, ವಸ್ತುಗಳಿಗೆ ಅಂತಃಸ್ಸತ್ವ ಎಂಬುದಿಲ್ಲ. ಚಿನ್ನಕ್ಕೆ 'ಚಿನ್ನತ್ವ' ಎಂಬುದೂ, ನಾಯಿಗೆ 'ನಾಯಿತನ' ಎಂಬುದೂ ಇರುವುದಿಲ್ಲ. ಆದರೆ ನಮಗಿರುವ ಪರಿಕಲ್ಪನೆಗಳ ಮೂಲಕ ಚಿನ್ನವನ್ನು ಒಂದು ಲೋಹವಾಗಿಯೂ, ಬೆಲೆಯುಳ್ಳದ್ದಾಗಿಯೂ ಹೊಳಪಿನದ್ದಾಗಿಯೂ ಹೀಗೆ ಹಲವು ರೀತಿಗಳಲ್ಲಿ ನೋಡಲು ಸಾಧ್ಯವಿದೆ ಎನ್ನುತ್ತೀರಿ. ಈ ಎರಡನೆಯ ವಾದವೇ ಸ್ಟ್ರಕ್ಚರಲಿಸಂನ ಮೂಲ ಸೆಲೆ ಎಂದು ಗುರುತಿಸುವುದು.  ಚದುರಂಗದ ಆಟದ ಉದಾಹರಣೆಯ ಮೂಲಕ ಇದನ್ನು ವಿವರಿಸಬಹುದು. ಚದುರಂಗದಾಟದಲ್ಲಿ ಹಲವು ಕಾಯಿಗಳಿವೆ. ಆದರೆ ಯಾವುದೇ ಒಂದು ಬಿಡಿ ಕಾಯಿಗೆ ತನ್ನಷ್ಟಕ್ಕೆ ಯಾವ ಬೆಲೆಯೂ ಇಲ್ಲ. ಉದಾಹರಣೆಗೆ ಕುದುರೆ ಎನ್ನುವ ಒಂದು ಕಾಯಿ ಇದೆ. ನಿಮ್ಮ ಚದುರಂಗದ ಹಾಸು ಕಳೆದುಹೋದ ಮೇಲೆ ಬಿಡಿಯಾಗಿ ಈ ಕಾಯಿ ನಿಮಗೆ ಮನೆಯ ಮೂಲೆಯಲ್ಲಿ ಎಲ್ಲೋ ಸಿಕ್ಕಿದರೆ, ಅದಕ್ಕೆ ಯಾವ ಬೆಲೆಯೂ ಇಲ್ಲ. ಅದನ್ನು ಒಂದು ಕುದುರೆಯಂತೆ ಬಳಸಲೂ ಬರುವುದಿಲ್ಲ. ಅದೇ ಚದುರಂಗದ ಆಟದ ಒಳಗೆ ಮಾತ್ರ ಆ